Don't Judge People Before You Truly Know Them! Read Count : 124

Category : Articles

Sub Category : Lifestyle
ಹೀಗೆ ಈ ಕಥೆ ನಾ ಓದ್ತಾ ಇದ್ದೆ... ಸಿಕ್ಕಾಪಟ್ಟೆ Inspire ಆಗಿ ನಿಮ್ಮ ಎಲ್ಲರ ಹತ್ತಿರ ಹಂಚಿಕೋಬೇಕು ಅಂತಾ ಅನಿಸ್ತು...
ಅದೇನಪ್ಪಾ ಅಂದ್ರೆ....

ತಂದೆ ಮತ್ತೆ ಮಗಾ ಇಬ್ಬರೂ ಸಹಾ ಟ್ರೈನ್ ನಲ್ಲಿ ಪ್ರಯಾಣ ಮಾಡ್ತಾ ಇರ್ತಾರೆ... 
ಇತ್ತ ಮಗನಿಗೆ ಟ್ರೈನ್ ನಿಂದ ಈಚೆ ಕಾಣುವಂತ ಒಂದಿಷ್ಟು ಮೋಡಗಳ ಆಗಿರಬಹುದು,ಈ ಹಿಂದೆ ಸರಿಯುವಂತ ಮರಗಳ ಆಗಿರಬಹುದು... so ಇದೆಲ್ಲವನ್ನೂ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿ ಅಪ್ಪನಿಗೆ ಪ್ರತಿ ಭಾರಿ ತೋರಿಸ್ತಾ ಇರ್ತಾನೆ...
ಆದರೆ, ಆತನ ವಯಸ್ಸು ಇಪ್ಪತ್ತನಾಲ್ಕು...!
ಈಗಾ ಅಲ್ಲೇ ಕೂತಂತ ಒಂದಿಷ್ಟು ಅಕ್ಕಪಕ್ಕದವರ್ಗೆ ಇದು ತುಂಬಾನೇ ವಿಚಿತ್ರ ಅಂತಾ ಅನ್ಸುತ್ತೆ... So ಅವರು ಅವನ ಅಪ್ಪನ್ನ ಕರದಬಿಟ್ಟು ಹೇಳ್ತಾರೆ... ನೀವ್ಯಾಕೆ ನಿಮ್ಮ ಮಗನ್ನ ಒಂದೊಳ್ಳೆ ಡಾಕ್ಟರ್ ಹತ್ತಿರ ತೋರಿಸಬಾರದು ಅಂತಾ...?
ಆಗಾ, ಆ ತಂದೆ ಕೊಟ್ಟಂತ ಉತ್ತರ.... ನಮ್ಮೆಲ್ಲರ ಜೀವನಕ್ಕೂ ಒಂದೊಳ್ಳೆ ನೀತಿ ಪಾಠ!
ನಾನ್ ಈಗಷ್ಟೇ ಡಾಕ್ಟರ್ ನ ಬೇಟಿ ಮಾಡ್ಕೊಂಡು hospital ಇಂದ ಬರ್ತಾ ಇದೀವಿ.. ಇವತ್ತು ನನ್ನ ಮಗನ ಕಣ್ಣಿನ ಆಪರೇಷನ್ ಇತ್ತು.. ಆತನಿಗೆ ಇಪ್ಪತ್ತನಾಲ್ಕು ವರ್ಷ ಆದ್ಮೇಲೆ ಕಣ್ಣ ಬರ್ತಾ ಇರೋದು ಹಾಗಾಗಿ ಅವನಿಗೆ ಈ ಇಡೀ ಪ್ರಪಂಚವನ್ನ ನೋಡಿ ತುಂಬಾನೇ ಖುಷಿಯಾಗ್ತಿದೆ ಅಂತಾ...
So...
ನಾವೆಲ್ಲರೂ ಸಹಾ ಹೀಗೆ ಅಲ್ವಾ...?? ಬೇರೇವರ ಜೀವನದ ಕಥೆ ತಿರುವುಗಳು ಏನು ಅಂತ ಗೊತ್ತ ಇಲ್ದೇ ಅವರ ಬಗ್ಗೆ ಸಿಕ್ಕಾಪಟ್ಟೆ ಮಾತಾಡ್ತಾವಿ... ಅವರನ್ನ easy ಆಗಿ ಜಡ್ಜ್ ಮಾಡಿ ಬಿಡ್ತೀವಿ...!
ಅದೇನೋ ಹೇಳ್ತರಲ್ಲ... ಈ ಪುಸ್ತಕ ಮೇಲ್ ನೋಟಕ್ಕೆ ಎಷ್ಟೇ ಚೆನ್ನಾಗ್ ಕಣ್ಸಿದ್ರುನೂ ಅದರ ಒಳಗಡೆ ಇರುವಂತಹ ಸಾಲುಗಳನ್ನ ಓದಿದಾಗ್ಲೆನೇ ಕಥೆಯ ಸಾರಾಂಶ ಏನು ಅಂತ ಗೊತ್ತ ಆಗೋದು......!!!


  • So... Don't Judge people before you truly know them....!!!

                                                           -asha 
-

Comments

  • It's really awesome and such a fact!🙌😊♥️

    Dec 08, 2023

Log Out?

Are you sure you want to log out?