
ಧರಣಿ
Read Count : 122
Category : Poems
Sub Category : N/A
ಧರಣಿ ಇಲ್ಲಿ ಧ್ಯಾನಸ್ಥೆ. ಬೀಸಿ ,ಓಲಾಡಿಸಿ,ಹೊರಳಿಸಿ ನೆಲ ಬೇರು ಮಡಚಿಕ್ಕುವ ಬಿರುಗಾಳಿಯೊಡನೆಯೇ ಸಹಬಾಳ್ವೆ. ಧರಣಿ ಇಲ್ಲಿ ಧ್ಯಾನಸ್ಥೆ... ಸುರಿವ ಜಡಿಮಳೆಗೆ ಮರಮಗಳು ಮುರಿದು ಹೊಳೆಅಳಿಯ ನೆರೆವುಕ್ಕಿ ಸೊಕ್ಕಿದರೂ,ಒಮ್ಮೊಮ್ಮೆ ಬಿಕ್ಕಿದರೂ ಧರಣಿ ಇಲ್ಲಿ ಧ್ಯಾನಸ್ಥೆ... ಕೊರೆವ ಹೊಸ ಯಂತ್ರ ಮೊರೆವ ಅಭಿವೃದ್ಧಿ ಮಂತ್ರ ಕಾಸು ಕಿಸೆಗಿಳಿಸುವ ತಂತ್ರ ಸೊಬಗುಳಿಯುವುದೇ ಅತಂತ್ರ. ಆದರೂ ಧರಣಿಯಿಲ್ಲಿ ಧ್ಯಾನಸ್ಥೆ... ಗಿರಿಯಂಚಲ್ಲಿ ಕರಿಮುಗಿಲು ಬೆಟ್ಟಬಯಲುಗಳೆಲ್ಲಾ ಹಸಿರು ತೊಗಲು. ಮಳೆ-ಇಳೆಯ ನಿತ್ಯ ಮಿಲನವಾಗಿರಲು ಒಲವೇ ಮುಗಿಯದೆದೆ ಬಲವು.. ಧರಣಿಯಿಲ್ಲಿ ತೃಪ್ತೆ,ಶಾಂತೆ,ನಿತಾಂತೆ,ಕಾಂತೆ.. ಧರಣಿ ಇಲ್ಲಿ ಧ್ಯಾನಸ್ಥೆ... 😍 ನಂದಿನಿ ವಿಶ್ವನಾಥ ಹೆದ್ದುರ್ಗ
Comments
- No Comments