
Read Count : 182
Category : Poems
Sub Category : N/A
-:ಅಜಾತಶತ್ರು:-ಶುಭಾಶಯ ನಿಮಗೆಓ..ಅಜಾತಶತ್ರುವೆ..!!!•ಓ..ಭಾರತಮಾತೆಯಹೆಮ್ಮೆಯ ಕುವರ.ನಿನಗೆ ಇಡೀ ದೇಶವೇಕೂಗಿದೆ ಜನ್ಮದಿನದ ಜೈಕಾರ•ದೃಢ ಮಾತಿನ ದೃಢತೆಗಾರಅಭಿವೃದ್ಧಿಯ ಕನಸುಗಾರ.ಕವಿ ಹೃದಯದ ಭಾವಜೀವಿನನ್ನೆದೆಯೆ ಸ್ಫೂರ್ತಿ ವಾಜಪೇಯಿ..!!!•ಅಟಲ್ ಎಂಬ ದಿಟ್ಟ ವ್ಯಕ್ತಿಅಚಲ ನಿಲುವಿನ ಮೂರ್ತಿ.ಶತ್ರುವಿಗೆ ಸ್ನೇಹ ಹಸ್ತ ಚಾಚಿದಹೆಮ್ಮೆಯ ನೇತಾರ ಅಜಾತಶತ್ರು..!!!•ವಿಜ್ಞಾನದ ಮುನ್ನಡೆಗೆ ಪ್ರೋತ್ಸಾಹಿಸಿದೆದೇಶದ ಆರ್ಥಿಕತೆ ಬಲಪಡಿಸಿದೆ.ನೀನಾದೆ ಭಾರತ ಪ್ರಕಾಶಿಸಿದ ಸೂರ್ಯದೇಶ ಮೆಚ್ಚಿದ ನಿನ್ನ ರಾಜ ಗಾಂಭೀರ್ಯ..!!!•ರಾಜಕಾರಣಕ್ಕೆ ಘನತೆ ಸಿಕ್ಕಿದ್ದೇ ನಿನ್ನಿಂದರಾಜತಾಂತ್ರಿಕತೆಯಲ್ಲಿ ಮೂಡಿತು ಸಂಬಂಧ.ಭಾರತಮಾತೆಯ ಸಂತ ಸುತ ನಿಮಗಿದುಜನ್ಮದಿನದ ಶುಭಾಶಯ..!!!
Comments
- No Comments