ಕಿರಿಕ್ ಕಥೆ
Read Count : 113
Category : Stories
Sub Category : Comedy
ಕರ್ಣ ಯಾಕೊ ಇಂದು ಎಂದಿನಂತೆ ಇರಲಿಲ್ಲ. ಅದಕ್ಕು ಕಾರಣ ಇತ್ತು. ಅವನು ಬೇರೆಯವರಿಗೆ ಒಳ್ಳೆದು ಮಾಡಿ ಅವನೆ ತೊಂದರೆಗೆ ಸಿಕ್ಕಿಹಕಿಕೊಳ್ತೀದ್ದ. ಅದರೂ ಮನೆಯಲ್ಲಿ ತಾನು ಮಾಮೂಲಿಯಾಗಿ ಇರಬೇಕಿತ್ತು. ಅಪ್ಪಿ ತಪ್ಪಿ ಸ್ವಲ್ಪ ಬೇಜಾರಿನಲ್ಲಿ ಇದ್ದರೂ ಅವನ ತಂಗಿ ಅದನ್ನು ಪತ್ತೆ ಹಚ್ಚಿ ಅವಳು ಯೋಚನೆಗೆ ಕುಳಿತು ಬಿಡುತ್ತಿದ್ದಳು. ತಂಗಿಗಾಗಿಯಾದರೂ ಅಣ್ಣ ನಗು ನಗುತ್ತಾ ಇರ್ತಿದ್ದ. ಬೆಳಗ್ಗೆ ಸರಿಯಾಗಿ 9 ಆಗಿರಬಹುದೆನೋ ಅಂದು ಶನಿವಾರ ಕರ್ಣ ಗಾಡವಾಗಿ ನಿದ್ದೆ ಮಾಡುತ್ತಿದ್ದ. ಕರ್ಣನ ಪೋನ್ ರಿಂಗ್ ಆಗುತ್ತಿತ್ತು.......... ಅಡುಗೆ ಮನೆಯಲ್ಲಿದ್ದ ಅವನ ತಂಗಿ ಕೃತಿ ಲೋ ಅಣ್ಣ ಪೋನ್ ರಿಂಗ್ ಆಗ್ತೀದೆ ನೋಡೋ ಅಂತಾ ಕಿರುಚುತ್ತಿದ್ದಳು. ಕರ್ಣ - ಏಯ್ ನನಗೂ ಕೇಳಿಸ್ತಿದೆ ಸುಮ್ನೀರೆ ಯಾಕ್ ಅಂಗ್ ಬಡ್ಕೋತಿಯಾ? ಕರ್ಣ ನಿದ್ದೆಗಣ್ಣಿನಿಂದ ಎದ್ದವನೆ ತನ್ನ ಮೊಬೈಲ್ Silent Mode ಗೆ ಹಾಕಿ ಮತ್ತೆ ಮಲಗಿಕೊಂಡ. ಪೋನ್ ಮತ್ತೆ ಮತ್ತೆ ರಿಂಗ್ ಆಗ್ತಾ ಇತ್ತು. ಕರ್ಣನ ರೂಮಿಗೆ ಬಂದ ಅವನ ತಂಗಿ ಏಯ್ ಅಣ್ಣ ಏಳೋ ಮೇಲೆ ಎಷ್ಟು ಮಲಗ್ತೀಯಾ? ಕರ್ಣ ಮಾತ್ರ ತಂಗಿಯ ಮಾತು ಕೇಳಿಸಿದರೂ ಕೇಳಿಸಿದವನಂತೆ ಮಲಗಿದ್ದ. ಅಮ್ಮ ಮನೆಗೆ ಬರುವಷ್ಟರಲ್ಲಿ ಮನೆ ಕೆಲಸ ಮುಗಿಸಬೇಕು ಅಂದುಕೊಂಡು ಕೃತಿ ಕೆಲಸದಲ್ಲಿ ತಲ್ಲಿನಾಳಾದಳು. ಈಗ ಸಮಯ ಸರಿಯಾಗಿ 12:20 ಕರ್ಣ ತಂಗಿ ಮಾಡಿದ ಉಪ್ಪಿಟ್ಟು ತಿಂದು ಬಂದು ತನ್ನ Mobile ನೋಡುತ್ತಾನೆ. ಯಾವುದೋ Unknown Number ನಿಂದ 8 Miss Call ಬಂದ್ದಿತ್ತು. ಕರ್ಣ ಯಾರಪ್ಪ ಪುಣ್ಯಾತ್ಮ ಇವನು ಬೆಳ್ ಬೆಳ್ಗೆ ಇಷ್ಟು ಸಲ ಪೋನ್ ಮಾಡವ್ನೆ ಅಂತಾ ಆ ನಂಬರ್ ಗೆ ಪೋನ್ ಹಾಯಿಸಿದ ಪೋನ್ ರಿಂಗ್ ಆಗ್ತೀತ್ತು ಆಗ್ತೀತ್ತು ಆಗ್ತೀತ್ತು ಹಾಯ್ ಕರ್ಣ ನಾನು ಕಣೋ ಅನಿ ಯಾಕೆ ಪೋನ್ ರೀಸಿವ್ ಮಾಡಿಲ್ಲ ನೀನು? ಕರ್ಣ - ನಾನು Unknown Number ರೀಸಿವ್ ಮಾಡಲ್ಲ ಅನಿಲ್ - ಲೋ ನೀನೆನ್ ಹುಡ್ಗಿನೇನೋ ಇಡಿಯಟ್.... ಕರ್ಣ - ಲೋ ಅನಿ ನಾನು ಸಾಲ ಜಾಸ್ತಿ ಆಗ್ಬೀಟ್ಟಿದೆ ಕಣೋ ಅದಕ್ಕೆ Unknown Number ರೀಸಿವ್ ಮಾಡ್ತೀಲ್ಲ. ಅನಿಲ್ - ಲೋ ನಂದಿದು ಜಿಯೋ ಸಿಮ್ ನೆನ್ನೆ ತಗೊಂಡೆ ನಂಬರ್ ಸೇವ್ ಮಾಡ್ಕೋ ನಾಳೆ ನನ್ನ frnd ಮದುವೆ ಒಬ್ನೆ ಹೋಗೋಕೆ ಬೇಜಾರು ನೀನು ಬಾ ನಾಳೆ Sharp 8 ಗಂಟೆಗೆ ನಿಮ್ಮ ಮನೆ ಅತ್ರ ಇರ್ತಿನಿ. ಕರ್ಣ - ಲೋ ನಾಳೆ ಭಾನುವಾರ ಮನೇಲಿ ಪ್ರೀ ಆಗಿ ಇರ್ತಿನಿ ನೀನು ಹೋಗಿದ್ ಬಾ. ಅನಿಲ್ - ಲೋ ಕರ್ಣ ನೀನು ಮದುವೆಗೆ ಬರಲ್ವಾ? ಕರ್ಣ- ಲೋ ನೀನ್ frnds ಯಾರು ನನಗೆ ಸರಿಯಾಗಿ ಪರಿಚಯ ಇಲ್ಲ ಅದಕ್ಕೆ ಹೇಳ್ತೀದಿನಿ. ಅನಿಲ್ - ನೀನ್ ನಾಳೆ ಬಂದ್ರೆ ಪರಿಚಯ ಆಗ್ತಾರೆ ಬಾರೋ ಕರ್ಣ - ಇಲ್ಲ ನಾನು ಬರಲ್ಲ Plz ನೀನು ಹೋಗು..... ಅನಿಲ್ - ಲೋ ಕರ್ಣ ನಿನಗೆ ಒಂದು ಡಿಪರೆಂಟ್ ಹುಡುಗಿನ ಆ ಮದುವೆಲಿ ತೋರಿಸ್ತೀನಿ ಕಣೋ ಈಗಲಾದರೂ ಬಾರೋ..... ಕರ್ಣ - ಹುಡುಗಿ ನಾ? ಅನಿಲ್ - ಹೌದು ಕರ್ಣ - ಯಾವ ಹುಡುಗಿ...... ಅನಿಲ್ - ಪುಲ್ ಡಿಪರೆಂಟ್ ಹುಡುಗಿ ಕರ್ಣ - ಡಿಪರೆಂಟ್ ಅಂದ್ರೆ? ಅನಿಲ್ - ನಾಳೆ ಮದುವೆಗೆ ಬಾ ಹೇಳ್ತೀನಿ. ಕರ್ಣ - ಓಕೆ ಓಕೆ ಅಂತಾ ಹೇಳಿ ಪೋನ್ ಕಟ್ ಮಾಡ್ತಾನೆ. ಮುಂದೆನಾಯ್ತು ಈ ಕಿರಿಕ್ ಕಥೆ ಅಂತಾ. ನಾಳೆ ಹೇಳ್ತೀನಿ
Comments
- No Comments